ದಿವ್ಯಾ ಉರುಡುಗ ಅವರು ಕನ್ನಡ ಧಾರಾವಾಹಿ ಮತ್ತು ಚಲನಚಿತ್ರ ನಟಿ. ಇವರು ಬಿಗ್ ಬಾಸ್ ಎಂಟರ ಟಾಪ್-೩ ಸ್ಪರ್ಧಿಗಳಲ್ಲಿ ಒಬ್ಬರು == ದಿವ್ಯಾ ಅವರ ಜೀವನ == ೨೦೧೩ರಲ್ಲಿ "ಚಿಟ್ಟೆ ಹೆಜ್ಜೆ" ಧಾರಾವಾಹಿಯ ಮೂಲಕ ಕಿರುತೆರೆಯನ್ನು ಪ್ರವೇಶಿಸಿದ ದಿವ್ಯಾ ಉರುಡುಗ ಅವರು ೨೦೧೭ರಲ್ಲಿ ತೆರೆಕಂಡ ಚಲನಚಿತ್ರ "ಹುಲಿರಾಯ" ಮೂಲಕ ಬೆಳ್ಳಿತೆರೆಯನ್ನು ಪ್ರವೇಶಿಸಿದರು. ಅವರು ೨೦೧೫ರಲ್ಲಿ ಸ್ಟಾರ್ ಸುವರ್ಣ ವಾಹಿನಿಯ "ಅಂಬಾರಿ" ಮತ್ತು "ಖುಷಿ" ಧಾರಾವಾಹಿಗಳಲ್ಲಿ ಮತ್ತು ೨೦೧೬ರಲ್ಲಿ "ಓಂ ಶಕ್ತಿ, ಓಂ ಶಾಂತಿ" ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. == ದಿವ್ಯಾ ಉರುಡುಗ ಅವರ ಚಲನಚಿತ್ರಗಳು == == ದಿವ್ಯಾ ಉರುಡುಗ ಮತ್ತು ಬಿಗ್ ಬಾಸ್ ಎಂಟು == ದಿವ್ಯಾ ಉರುಡುಗ ಅವರು ಕನ್ನಡದ ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನ ಎಂಟನೇ ಅವತರಣಿಕೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಇವರು ಬಿಗ್ ಬಾಸ್ ನೀಡುತ್ತಿದ್ದ ಸವಾಲುಗಳನ್ನು ಎದುರಿಸುತ್ತಿದ್ದ ರೀತಿ ಮತ್ತು ಅಂತರಾಷ್ಟ್ರೀಯ ಬೈಕ್ ರೇಸರ್ ಅರವಿಂದ್ ಕೆ.ಪಿ ಅವರ ನಡುವಿನ ಸ್ನೇಹದಿಂದ ಪ್ರಖ್ಯಾತರಾಗಿದ್ದರು == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ದಿವ್ಯಾ ಉರುಡುಗ ಐ ಎಮ್ ಡಿ ಬಿನಲ್ಲಿ